ಯಾಕೆ ಈ ಸಂಜೆಯ ಆಕಾಶ
ಒಬ್ಬರ ರಟ್ಟೆಯ ಸೊಕ್ಕಿಗೆ,
ಇನ್ನೊಬ್ಬರ ಬಧ್ಧ ವೈರಕ್ಕೆ,
ಮತ್ತೊಬ್ಬರ ಸ್ವಾರ್ಥಕ್ಕೆ, ದುರಾಸೆಗೆ,
ಮತ್ಯಾರದೋ ಧನ ದಾಹಕ್ಕೆ, ಭೂ ದಾಹಕ್ಕೆ,
ಧರ್ಮ ಸಂಸ್ಥಾಪನೆಯಾಸೆಗೆ, ಚಕ್ರಾಧಿಪತ್ಯದಾಸೆಗೆ,
ಕಾರಣವಲ್ಲದ ಕಾರಣಕ್ಕೆ,
ಬದುಕ ಗೆಲ್ಲಲು ಸೋತು,
ಅದಿಲ್ಲದಿರೆ, ಸಾವ ಗೆಲ್ಲಲು ಹೋರಾಡಿ,ಆಹುತಿಯಾದ ಅಮಾಯಕರ,
ಎದೆಯಿಂದ ಹರಿದ ನೆತ್ತರಿನ ಓಕುಳಿಯಲಿ
ಆಗಸದ ನೀಲ ಅಂಗವಸ್ತ್ರವನು
ಅದ್ದದ್ದಿ ಹರಡಿದ ಹಾಗೆ,
ಎಲ್ಲವೂ ಬೆಂಕಿಯಲಿ ಹೊತ್ತಿ ಉರಿದು,
ಉಳಿದ ಬೂದಿಯಲಿ ಮುಚ್ಚಿದ ಕೆಂಡದ
ಮಂದ ಬೆಳಕಿನ ಹಾಗೆ,
ವಿಷಣ್ಣ ಭಾವವ ಸುರಿವ
ನೀರವ ಸ್ಮಶಾನ ಮೌನದ ಹಾಗೆ,
ಕಾಣಿಸುವುದೋ ನನಗೆ.
ಟಿಪ್ಪಣಿ:
ಮೇಲಿನ ದೃಶ್ಯವನ್ನು ಸೆರೆಹಿಡಿದದ್ದು ಅಮೇರಿಕದ, ಟೆಕ್ಸಸ್ ರಾಜ್ಯದ "ಸ್ಯಾನ್ ಎಂಟೋನಿಯೋ"ದಲ್ಲಿ. ಟೆಕ್ಸಸ್ ಬಂಧವಿಮುಕ್ತಗೊಳ್ಳುವದರಲ್ಲಿ ಸ್ಯಾನ್ ಎಂಟೋನಿಯೋ ರಕ್ತಕ್ರಾಂತಿ ಮಹತ್ವದ ಪಾತ್ರವಹಿಸಿದೆ. ಇಲ್ಲಿರುವ ಚಿತ್ರ ಅಲ್ಲಿಯ ಯಾವುದೋ ಒಂದು ಕಟ್ಟಡದ ಕೊನೆಯಂತಸ್ತಿನ ಭಾಗವಾಗಿದ್ದು, ದ್ವಜ ಅರ್ಧಕ್ಕೆ ಹಾರಾಡುತ್ತಿರುವ ಕಾರಣ ಮಾತ್ರ, ನನಗೆ ಪ್ರಶ್ನೆಯಾಗಿಯೇ ಉಳಿದಿದ್ದರೂ, ಬರಹಕ್ಕೊಂದು ಭಾವ ನೀಡಿದೆಯೆಂದೆನಿಸುತ್ತಿದೆ.

25 comments:
ಸು೦ದರ ಚಿತ್ರ, ಅರ್ಥವತ್ತಾದ ಕವಿತೆ.
ಅಬ್ಬಾ, ಎಂಥಾ ಭಾವದೋಕುಳಿ!
ನೀವು ಈ ಚಿತ್ರದ ವಿವರವನ್ನು ಕೊಟ್ಟಿರುವುದು ನಿಜಕ್ಕೂ ಸಹಾಸವಾಯಿತು. ನಿಮ್ಮ ಕವನ ಮತ್ತೂ ಅರ್ಥಪೂರ್ಣವಾಯಿತು.
ಚಿತ್ರದಿಂದ ಭಾವವೋ..ಭಾವದಿಂದ ಚಿತ್ರವೋ ..ಹೇಗೇ ಹೇಳುವುದು. ...ಒಟ್ಟಿನಲ್ಲಿ Super...ಧನ್ಯವಾದಗಳು ಸರ್..
’ಬದುಕ ಗೆಲ್ಲಲು ಸೋತು, ಸಾಕ್ಶಿಯಾಯಿತೇ..ಆಕಾಶ!!!
ಚೆನ್ನಾಗಿದೆ ಸಾರ್
ಸೂಪರ್ ಸರ್..
excellent kavite bhttare.
KANISUVADO NANAGE NANU ANDUKONDIDDENE
SARTHAKA DOSTA DINADINDA DINAKKE NAVU
NODUVA DINAVONDE ALLA DOSTANU HOSABANE
ADBUTA KALPANAVILASA
Superb! Both photography and write up.
ಕಲ್ಪನೆ ತುಂಬಾ ಚೆನ್ನಾಗಿದೆ.
ಚಿತ್ರಕ್ಕೆ ತಕ್ಕುದಾದ ಕವನ. ಚೆನ್ನಾಗಿದೆ.
ಚಿತ್ರ ಹಾಗು ಕವನ ಎರಡೂ ಚಂದವಾಗಿವೆ :)
ಚೆನ್ನಾಗಿದೆ ಸಾರ್, ಕವನಕ್ಕೆ ತಕ್ಕ ಉತ್ತಮ ಚಿತ್ರ.. ಚಿತ್ರಕ್ಕೆ ತಕ್ಕ ಉತ್ತಮ ಕವನ.. ಯಾವುದು ಸರಿ?? ಒಂದು ಪ್ರಶ್ನೆ , ಬೇಸರಿಸದಿರಿ.. ನಿಮ್ಮ ಬ್ಲಾಗ್ ಗೆ ನಾಭಿ ಅಂತ ಯಾಕೆ ಹೆಸರಿಟ್ಟಿರಿ? (ನನ್ನ ಬ್ಲಾಗ್ ಗೆ ಒಂದು ಉತ್ತಮ ಹೆಸರಿಡಬೇಕು ಅನ್ನೋ ನನ್ನ ಆಸೆ ಇನ್ನೂ ಈಡೇರಿಲ್ಲ!!!!)
ಮನಮುಕ್ತಾ ಅವರೆ,
ಚಿತ್ರ ಮತ್ತು ಕವನ ಎರಡೂ ನಿಮಗೆ ಮೆಚ್ಚಿಗೆಯಾಗಿದ್ದಕ್ಕೆ ನನಗೆ ನಿಜಕ್ಕೂ ಸಂತಸವಾಗಿದೆ.
ಸುನಾಥ್ ಅವರೆ,
ಹೊಗಳಿಕೆಯೋಕುಳಿ ಹರಿಸಿದ್ದೀರಿ..ನಿಮ್ಮ ಪ್ರೀತಿ ಯಾವತ್ತೂ ಹೀಗೇ ಇರಲಿ.
ಕೃಷ್ಣ ಮೂರೂರು ಅವರೆ,
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.
ಸುಬ್ರಹ್ಮಣ್ಯ ಭಟ್ ಅವರೆ,
ನಿಮ್ಮ ಮೆಚ್ಚುಗೆಯಂತೂ ನನ್ನ ಮುಂದಿನ ಬರವಣಿಗೆಗೆ ಪ್ರೋತ್ಸಾಹಕ..ಥ್ಯಾಂಕ್ಸ್.
Kuusu Muliyala ಅವರೆ,
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.
ಆನಂದ ಅವರೆ,
ಕೃತಜ್ಞತೆಗಳು.
ಮಿತ್ರ ಜಿಜಿ,
ದೋಸ್ತ ಹಳಬನಿರಲಿ, ಹೊಸಬನಂತೆ ಕಾಣಲಿ.. ದೋಸ್ತ..ದೋಸ್ತನೆ! ಅಲ್ದನ?
ಆತ್ಮೀಯ ವಸಂತ್,
ನೀನು, ಚಿತ್ರ ಮತ್ತು ಎರಡೂ superb ಎಂದಿದ್ದು, ನಾನು ಬಯಸಿದ್ದಕ್ಕಿಂತ ಎಷ್ಟೋಪಾಲು ಹೆಚ್ಚಿಗೆ.
ತೇಜಸ್ವಿನಿ ಹೆಗಡೆ ಅವರೆ,
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.
ಶರಶ್ಚಂದ್ರ ಕಲ್ಮನೆ ಅವರೆ,
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.
ಡಾ.ಕೃಷ್ಣಮೂರ್ತಿ ಅವರೆ,
ನಿಮಗೆ ಮೆಚ್ಚುಗೆ ನನಗೆ ಅತೀವ ಸಂತೋಷ ತಂದಿದೆ. ಆದಸ್ತು ಬೇಗ ನಿಮ್ಮ ಬ್ಲಾಗ್ ಬರಲಿ ಎಂದು ಆಶಿಸುವೆ.
ರವಿಕಾಂತ ಗೋರೆ ಅವರೆ,
ಚಿತ್ರ/ಕವನ ಎರಡೂ ಮೆಚ್ಚುಗೆ ಎಂದು ತಿಳಿಸಿದ್ದಕ್ಕೆ ಥ್ಯಾಂಕ್ಸ್.
ಇನ್ನು ಈ ಬ್ಲಾಗ್ ಹೆಸರು- ನನ್ನ ಹೆಸರಿನ ಸಂಕ್ಷಿಪ್ತ ರೂಪ 'ನಾಭ' ಬದಲು 'ನಾಭಿ'..ಅಷ್ಟೇ. ಹೀಗೆಯೇ ನಿಮ್ಮ ಬ್ಲಾಗ್'ಗೆ ನಿಮಗಿಷ್ಟವಾಗುವ ಹೆಸರೊಂದು ಅಚಾನಕ್ ಆಗಿ ಹೊಳೆಯಲಿ ಆಶಿಸುವೆ. ನಿಮ್ಮ ಹೆಸರೇ ಚೆನ್ನಾಗಿದೆ..ಅದಕ್ಕೆ ತಕ್ಕಂತೆ ಸೂರ್ಯ,ರವಿ,ರಶ್ಮಿ ಎಲ್ಲವೂ ಚೆನ್ನಾಗಿದೆ ಅಲ್ಲವೇ?
Post a Comment