[ಕೋರಿಯನ್ ಯುದ್ಧ (೧೯೫೦-೫೩)ದಲ್ಲಿ ಮಡಿದ ಯೋಧರ ನೆನಪಿಗೆ ವಾಶಿಂಗ್ಟನ್ ಡಿ.ಸಿ.ಯಲ್ಲಿ ಕಟ್ಟಿದ ಸ್ಮಾರಕದಲ್ಲಿರುವ ಪ್ರತಿಮೆಗಳು]
ನಮ್ಮ ತಾಯ್ನಾಡ ಗಡಿಯಲ್ಲೀಗ
ಭಾರೀ ಹೋರಾಟವಂತೆ
ಇಂಚು ಇಂಚಿನ ಭೂಮಿಗೂ
ಬಿಟ್ಟುಕೊಡದ ಕಾದಾಟವಂತೆ.
ದಿನಂಪ್ರತಿ ಮದ್ದು ಗುಂಡುಗಳ
ಎಡೆಬಿಡದ ಹಾರಾಟವಂತೆ
ನಮ್ಮದೆಷ್ಟೋ ವಿಮಾನಗಳು
ಶತ್ರುಗಳ ಗುಂಡಿಗಾಹುತಿಯಾದವಂತೆ.
ಕಾಳಗದಲಿ ಹೋರಾಡಿ ನಮ್ಮವರು
ವೀರ ಸ್ವರ್ಗ ಸೇರಿದರಂತೆ.
ದೇಶಕಾಗಿ ಜೀವ ತೆತ್ತವರಿಗೆ
ರಾಷ್ಟ್ರ ಗೌರವದ ಮರ್ಯಾದೆಯಂತೆ.
ಹುತಾತ್ಮರ ಬಂಧು ಬಳಗ
ತಮಗೆ ತಾವೇ ಸಂತೈಸಿಕೊಂಡರಂತೆ.
ಜನ್ಮ ಜನ್ಮಾಂತರಕೂ ಈ ದೇಹ
ದೇಶಕೇ ಮುಡಿಪು ಎಂದರಂತೆ.
ಗಡಿನಾಡ ಜನರೆಲ್ಲ ಜೀವ ಭಯದಿ
ವಲಸೆ ಬಂದಿಹರಂತೆ.
ನೆಲೆಯಿಲ್ಲದೇ ಕೂಳಿಲ್ಲದೆಯೇ
ತಬ್ಬಲಿಗಳ ಅರ್ತನಾದವಂತೆ.
ನೊಂದವರ ನೆರವಿಗೆಂದು ನಾಡ ಜನರೆಲ್ಲ
ಧನ ಕನಕ ಕೂಡಿಸುತಿಹರಂತೆ,
ರಕ್ತದಾನ ಮಾಡುತಿಹರಂತೆ,
ಮೆರವಣಿಗೆ ತೆಗೆಯುತಿಹರಂತೆ.
ಇದುವರಿಗಿನದೆಲ್ಲ ಬರೀ ಪೇಪರಿನ ಸುದ್ದಿ,
ಮತ್ತೆ ದೃಶ್ಯ ಮಾಧ್ಯಮದ ಸುದ್ದಿ.
ದೂರದಲಿ ತಂಪಾಗಿರುವ ಇವನಿಗೆ
ಇದಾವುದರ ಬಿಸಿಯೇ ಇಲ್ಲ.
ಸದ್ಯಕ್ಕೆ ದೇಶಕಾಗಿ ತಾನು
ಮಾಡಬೇಕಾದುದೇನೂ ಇಲ್ಲವೆಂದು
ಜೋರಾಗಿ ಆಕಳಿಸಿ, ಟಿವಿ ಆರಿಸಿ,
ಮುಸುಕೆಳೆದು ಬೆಚ್ಚಗೆ ಮಲಗಿಕೊಂಡ.

13 comments:
ನಿಜವಾಗಿಯೂ ಇದೇ ವರ್ತಮಾನ...ಮಾರ್ಮಿಕವಾಗಿದೆ ನಿಮ್ಮ ಕವನ. ಚೆನ್ನಾಗಿದೆ. ವಂದನೆಗಳು
ಕವಿತೆ ಚನ್ನಾಗಿದೆ..
ಮಾನವನ ಬೇಜವಾಬ್ಧಾರಿ ಮತ್ತು ನಿಶ್ಕ್ರಿಯತೆ ಬೇಸರ ಹುಟ್ಟಿಸುತ್ತದೆ....
ಭಾವ ಚನ್ನಾಗಿದೆ.
ಚೆನ್ನಾಗಿದೆ .. ಅವನ್ಯಾವನು ಸಾರ್ ಯಾವುದರ ಪರಿವೆಯೇ ಇಲ್ಲದೆ ತಂಪಾಗಿರುವವನು?? :-)
ಯುದ್ಧ ಅದೆಷ್ಟು ಕ್ರೂರ ಅಲ್ಲವೇ...?
ಚೆನ್ನಾಗಿದೆ ಭಟ್ರೇ, GOOD EFFORT !
ನಮಸ್ತೆ...
ಬ್ಲಾಗ್ ತುಂಬಾ ಅರ್ಥಪೂರ್ಣ ಬರಹಗಳಿವೆ. ಹುಡುಕಾಟದ ಕುರುಹುಗಳಿವೆ. ಮತ್ತಷ್ಟು ಬರೆಯಲು ಹಾರೈಕೆ.
ಬರವಣಿಗೆ ಗೆಲ್ಗೆ!
ಕವಿತೆ ಅರ್ಥಪೂರ್ಣವಾಗಿದೆ.
vartamanakke kannadi hidididdeeri. ondu sanna chaatiyetige dhanyavaada. Good photography!
ನಾಭಿ,ಯವರೆ ಸರಿಯಾಗಿ ಹೇಳಿದಿರಿ.ಮಾತಿನಲ್ಲರಮನೆಯ ಕಟ್ಟುವವರೇ ಹೆಚ್ಚು.ಚೆನ್ನಾಗಿದೆ
ondu olleya kavite. DR.D.T.K.
idu bahuteka nammellarigoo anvayavagotte ansutte...
chenaagide
sir ishtavaaytu:):)
'Narayan Bhat' ಅವರೇ...
ಹೌದು.. ವಾಸ್ತವ!
ನಿಮ್ಮ ಕವನದ ಕೊನೆಯಲ್ಲಿ ಬಂದ ವ್ಯಕ್ತಿ.. ಜೀವಂತಶವ ದೇಶಿಕ..
ನನ್ನ 'ಮನಸಿನಮನೆ'ಗೆ...:http//manasinamane.blogspot.com
ಸುಬ್ರಮಣ್ಯ ಭಟ್ ಅವರೆ,
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು. ಈ ವರ್ತಮಾನ ಭೂತಕಾಲದಲ್ಲಿ ಸೇರಿ ಹೋಗಲಿ ಎಂದು ಬಯಸೋಣವೇ?
ಚುಕ್ಕಿ ಚಿತ್ತಾರ ಅವರೆ,
ಮೆಚ್ಚಿ ಪ್ರತಿಕ್ರಿಯಿಸಿದಕ್ಕೆ ಕೃತಜ್ಞತೆಗಳು. ಮನುಷ್ಯನ ಬೇಜವಾಬ್ದಾರಿ ನಡುವಳಿಕೆ ನನಗೂ ಬೇಸರ ಹುಟ್ಟಿಸುತ್ತದೆ..ಅಂಥದೊಂದು ಪಾತ್ರ ಈ ಕವನದಲ್ಲಿ ಇರುವುದಕ್ಕಾಗಿ ನನಗೆ ಇನ್ನೂ ಹೆಚ್ಚಿನ ಬೇಸರವಿದೆ.
ರವಿಕಾಂತ ಗೋರೆ ಅವರೆ,
ಅದು ನಾನೇ ಇದ್ದರೂ ಇರಬಹುದು! -ಮನಸಿನಲ್ಲಾದರೂ ಆ ಭಾವ ಬಂದಿರಬಹುದು ಅನ್ನೋ ಕಾರಣದಿಂದ. ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.
ವಿ.ಆರ್.ಭಟ್ ಅವರೆ,
ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.
ಏಕಾಂತ ಅವರೆ,
ನೀವು ನನ್ನ ಬ್ಲಾಗ್'ನಲ್ಲಿ ಹುಡುಕಾಟದ ಕುರುಹು ಕಂಡಿದ್ದಕ್ಕೆ ಇನ್ನಷ್ಟು ಹುಡುಕಾಟ ನಡೆಸುವ ಉಮೇದು ಬಂದಿದೆ.. ಅದಕ್ಕೇ ನಿಮಗೆ ಥ್ಯಾಂಕ್ಸ್.
ಮನಮುಕ್ತಾ ಅವರೆ,
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.
ವಸಂತ್,
ಇದು ಕನ್ನಡಿಯಲ್ಲಿ ಕಂಡದ್ದು..ಮಿಥ್ಯವಾಗಿಯೇ ಇರಲಿ.
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.
ಕು.ಸು.ಮುಲಿಯಾಳ ಅವರೆ,
ಪ್ರತಿಕ್ರಿಯಿಸಿದ್ದಕೆ ಕೃತಜ್ಞತೆಗಳು.
ಡಾ.ಕೃಷ್ಣಮೂರ್ತಿ ಅವರೆ,
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.
ಕೃಷ್ಣ ಮೂರೂರು ಅವರೆ,
ಈ ಕವನ ಭೂತಕಾಲಕ್ಕೆ ಮಾತ್ರ ಅನ್ವಯಿಸಲಿ ಅಂತ ನಾನೂ ಬಯಸುತ್ತೇನೆ. ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.
ಗೌತಮ್ ಹೆಗಡೆ ಅವರೆ,
ಈ ಕವನ ನಿಮಗೆ ಇಷ್ಟವಾಗಿದ್ದಕ್ಕೆ ನನಗೂ ಖುಷಿಯಾಗಿದೆ.
ಗುರು-ದೆಸೆ ಅವರೆ,
ಕೊನೆಯಲ್ಲಿ ಬಂದ ವ್ಯಕ್ತಿ ನನಗೂ ಬೇಸರ ಹುಟ್ಟಿಸಿದ್ದಾನೆ.
ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.
Post a Comment