Tuesday, February 16, 2010

ಸ್ನೇಹ



ತೆರೆ ತೆರೆಯಾಗಿ ಹರಿವ
ತೊರೆಯ ನೀರು
ತೊರೆದು ಹೋದದ್ದು ಯಾವಾಗ
ಎನ್ನುವದೇ ಅರಿವಾಗುವುದಿಲ್ಲ.


ಇತಿಹಾಸ ಸೇರಿದ ನದಿ
ಸರಸ್ವತಿಯಂತೆ ಹರಿದು ಹೋಗಿರಬಹುದೇ,
ಆಚೀಚೆ ದಡಗಳ ಮರೆತು
ಹರಡಿದ ಮರಳಿನ ನಡುವೆ?


ಗುಪ್ತ ಗಾಮಿನಿಯ ನೆಲೆಯೆಲ್ಲ
ಹರಿವ ಕನಸಿಗೆ ಕೊನರಿ
ಕೊನೆಗಾದರೂ ಒಸರಲಿ
ಮರಳೊಡಲಿಂದ ಹನಿ ನೀರು.

13 comments:

Subrahmanya said...

ಸ್ನೇಹವೆಂಬ ಸೇತುವೆಯ ಕೆಳಗೆ ಸಾಕಷ್ಟು ನೀರು ಹರಿದುಹೋಗಿರುತ್ತದೆ...ಆದರೂ ಅದು ಪವಿತ್ರವೇ..! ಕವನ ಅರ್ಥಪೂರ್ಣವಾಗಿದೆ..ಧನ್ಯವಾದ

Unknown said...

ಚೆನ್ನಾಗಿದೆ ಸಾರ್..

sunaath said...

ಕಾಲದ ನದಿ ಹೀಗೇ ಹರಿದು ಹೋಗುವದೇ. ನದಿಯ ತಳದಿಂದ ನೀರು
ಜಿನುಗಲಿ ಎನ್ನುವ ಆಶಯ ಚೆನ್ನಾಗಿದೆ.

SANTA said...

tumba chennagide kavana.Konegaadaroo osarali maralodalinda hani neeru saalu tumba ishtavaayitu. Thanks.

V.R.BHAT said...

good !

H S ASHOK KUMAR said...

nadiya punarujeevanada ashaya uttamavaagide.
nimma "ithihaasada puta seriruva saraswathiya parikalpane mattu paunch" mattomme yochane maduva haage maduttade.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಕವನ ಚೆನ್ನಾಗಿದೆ..
ಅಭಿನಂದನೆಗಳು..

ತೇಜಸ್ವಿನಿ ಹೆಗಡೆ said...

ತುಂಬಾ ಇಷ್ಟವಾಯಿತು ಕವನ. ಅದರಲ್ಲೂ ಮೊದಲ ಹಾಗೂ ಸಾಲುಗಳು ಮತ್ತೂ ಇಷ್ಟವಾದವು.

Dr.D.T.Krishna Murthy. said...

Hariyuva Neerige yaava kone,haaruva hakkige elli mane?

Ravi Hegde said...

ಭಟ್ರೇ,
ನಿಮ್ಮ ಕವನ ಚೆನ್ನಾಗಿದೆ.
ಆಫೀಸಿನಲ್ಲಿ ಪರ್ಸನಲ್ ಮೇಲ್ ಬ್ಲೊಕ್ ಆಗಿರುವದರಿಂದ ಮೇಲ್ ಗೆ ರಿಪ್ಲಾಯ್ ಮಾಡಲಾಗಲಿಲ್ಲ.
ಉತ್ತರ: ಬಿಸ್ಗೊಡ್ | ಮೇಲಿನಮನೆ.

ರವಿ

ಜಲನಯನ said...

ನಾರಾಯಣ್ ಸರ್, ಪದಗಳು ಸರಳ ಆದರೆ ಗಹನತೆಯತ್ತ ಎಳೆಯುತ್ತವೆ...ಅದರಲ್ಲೂ ಈ ಸಾಲುಗಳು
ತೆರೆ ತೆರೆಯಾಗಿ ಹರಿವ
ತೊರೆಯ ನೀರು
ತೊರೆದು ಹೋದದ್ದು ಯಾವಾಗ
ಎನ್ನುವದೇ ಅರಿವಾಗುವುದಿಲ್ಲ

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

"ಗುಪ್ತ ಗಾಮಿನಿಯ ನೆಲೆಯೆಲ್ಲ
ಹರಿವ ಕನಸಿಗೆ ಕೊನರಿ
ಕೊನೆಗಾದರೂ ಒಸರಲಿ
ಮರಳೊಡಲಿಂದ ಹನಿ ನೀರು"-ಅತ್ಯ೦ತ ಇಷ್ಟವಾದವು ಈ ಸಾಲುಗಳು. ಅಭಿನ೦ದನೆಗಳು.

ಗೌತಮ್ ಹೆಗಡೆ said...

bhatre nice:)