ಹೀಗೊಂದು ಮುಂಜಾನೆ
ಕೋಳಿ ಕೂಗುತ್ತಿದ್ದಂತೆ
ಕಮಲದಂಥ ಕಣ್ಣ ತೆರೆದರೆ
ಅಂಬರಾಸುರನ ಹಣೆಗಣ್ಣಿಂದ
ನಿಗಿನಿಗಿ ಕೆಂಡಗಳುದುರಿ
ಉರುಳುರುಳಿ ದರೆಗಿಳಿದು
ನೆಲದ ನೆರಳಡಗಿ
ನಳನಳಿಸುವ ಹಸಿರಿನ ಉಸಿರೇ ನಿಂತಿತೋ.
ಮುಟ್ಟಿದರೆ ಮಾಸುವ
ಮೃದು ಮಾಂಸದ ಹಸುಳೆಗಳ
ಮಕಮಲ್ಲಿನ ಹೂ ಮನಸುಗಳು
ಒಳಗೊಳಗೇ ಬೆಂದು
ಕುಲುಮೆಯಲಿ ಕರಕಲಾದವೋ.
ಹೊಂಗನಸುಗಳ ಕಂಗಳಲ್ಲೆಲ್ಲ
ಅಂತರಾಳವ ಹೊಕ್ಕಿರಿವ ಕಿರಣಗಳು
ರಕ್ತಬೀಜಾಸುರನಂತೆ ಬಿತ್ತರಿಸಿ
ಕಣ್ಣಿನಾಳದ ತಿಳಿನೀರು
ಹನಿಹನಿಯಾಗಿ ಹೊತ್ತಿ ಉರಿದು
ಕೃಷ್ಣವಿವರಗಳಾದವೋ.
ಕೊನೆಗೊಮ್ಮೆ ಮುಸ್ಸಂಜೆಯಲಿ
ಕ್ರೂರತೆಯು ದಣಿದಾಗ
ಚಂದಾದ ಚಂದ್ರಾಮ
ಚುಕ್ಕಿಯಾಟದ ಚುಕ್ಕಿಗಳೋಲಗದಲಿ
ಚರಮಗೀತೆ ಹಾಡಿದನೋ.
ಮರುದಿನ ಮುಂಜಾನೆ
ಮಂಜು ಮುತ್ತಿಡುವಾಗ
ಕತ್ತಲೆಯ ಬೆತ್ತಲು ಮಾಡಿದ
ಬೆಳಗು ಬೆರಗಾಗಿ ನೋಡಿತ್ತು -
ಹಸಿರು ಧರೆ ತುಂಬಾ ಅರಳಿತ್ತು,
ಬದುಕಿ ಬಾಳುವ ಆಸೆ ಹೊತ್ತು.
26 comments:
ಮೊನ್ನೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ನಡೆದ
ವಿಮಾನದ ಅವಗಢದ ಕಾವ್ಯದ ಅಭಿವ್ಯಕ್ತಿಯಂತಿದೆ ನಿಮ್ಮ ಕವನ.ಬಹಳ ದಿನಗಳದ ನಂತರ ಬ್ಲಾಗಿನಲ್ಲಿ ಕಾಣಿಸಿಕೊಂಡರೂ ಒಳ್ಳೆಯ ಕವನ ಕೊಟ್ಟಿದ್ದೀರಿ.ಅಭಿನಂದನೆಗಳು.
ವಾಸ್ತವದ ಭೀಕರತೆಯನ್ನು ನೆನೆದರೆ ಭಯವಾಗುತ್ತದೆ. ಚರಮಗೀತೆಯಂತೂ ಎಲ್ಲರಿಗೂ ಖಚಿತ. ಮನಮುಟ್ಟುವ ಕವನ.
ಭೀಕರ ವಾಸ್ತವತೆ ಹಾಗು ಅದನ್ನು ಮೆಟ್ಟಿ ನಿಲ್ಲಬೇಕಾದ ಬಾಳಿನ ಕನಸುಗಳನ್ನು ಯಥಾರ್ಥವಾಗಿ ಕವನದಲ್ಲಿ ರೂಪಿಸಿದ್ದೀರಿ.
ಭೀಕರ ವಾಸ್ತವತೆ ಹಾಗು ಅದನ್ನು ಮೆಟ್ಟಿ ನಿಲ್ಲಬೇಕಾದ ಬಾಳಿನ ಕನಸುಗಳನ್ನು ಯಥಾರ್ಥವಾಗಿ ಕವನದಲ್ಲಿ ರೂಪಿಸಿದ್ದೀರಿ.
ಆತ್ಮೀಯ ಡಾ.ಕೃಷ್ಣಮೂರ್ತಿ ಅವರೆ,
ಈ ಕವನ 'ಬಜ್ಪೆ ವಿಮಾನ ನಿಲ್ದಾಣದ ಅವಗಢವನ್ನು ಅಭಿವ್ಯಕ್ತಿಸುವಂತಿದೆ' ಅನ್ನುವದು ನನಗೆ ಹೊಳೆದದ್ದು ನಿಮ್ಮ ಪ್ರತಿಕ್ರಿಯೆ ಬಂದ ನಂತರವೇ. ಈ ಕವನವನ್ನು ಬರೆದು ವರ್ಷಗಳೇ ಉರುಳಿ ಹೋಗಿವೆ. ಹೊಸ ಅರ್ಥ ಹೊಳೆಯಿಸಿದ್ದಕ್ಕೆ ಕೃತಜ್ಞತೆಗಳು.
ಸುಬ್ರಮಣ್ಯ ಅವರೆ,
ನೀವನ್ನುವದು ನಿಜ - ವಾಸ್ತವದ ಭೀಕರತೆ ಭಯ ಹುಟ್ಟಿಸುತ್ತದೆ......ಆದರೂ ಬದುಕು ಸುಂದರವಾಗಿದೆ ಅಲ್ಲವೇ. ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.
ಸುನಾಥ್ ಅವರೆ,
ಈ ಕವನ ನಿಮಗೆ ಮೆಚ್ಚಿಗೆಯಾದದ್ದು, ನನಗೆ ತಂದುಕೊಟ್ಟಿದ್ದು ಸಾರ್ಥಕ ಭಾವ..ಮತ್ತೆ ಕನಸು ಚಿಗುರಲು ಚೇತನ. ಕೃತಜ್ಞತೆಗಳು.
ಕಣ್ಣಂಚನ್ನು ಕನಸುಗಳನ್ನು ಸುಟ್ಟು ಕರಕಲಾಗಿಸುವ ಬಿಸಿಲು
ದಿನದ ಕ್ರೂರತೆಗೆ ಸಂಜೆ ತಂಪೆರೆವ ಚಂದಮನ ಬೆಳದಿಂಗಳು
ಮುಂಜಾನೆ ಮತ್ತದೇ ಹಸಿರು ಕತ್ತಲು ಬೆತ್ತಲಾದಾಗ!!
ಕಾಗೆಯನ್ನು ಕೋಗಿಲೆಯನ್ನು ಕಪ್ಪಾಗಿಸಿ
ಕಾಕ ಕರ್ಕಶ ವನ್ನು - ಪಿಕದ ಮಧುರ ನಿನಾದಿಂದ ಅಳಿಸಿ
ಒಣತರಗೆಲೆ ಉದುರಿಸಿ ಹಸಿರಿನ ಉಸಿರನ್ನು ಅಡಗಿಸಿ
ಮತ್ತೆ ಹಸಿರನ್ನು ಚಿಗುರಿಸುವ ವಸಂತಕಾಲದ ದಿನದಲ್ಲೇ ಎಲ್ಲವೂ! "ನಿರಂತರ"ದ ಕಲ್ಪನೆ ಸುಂದರ!!
ನಿಜ.. ಇಂದು ಸಾವಾಗಿ ಕಾಡುವ ಯಾತನೆ.. ನಾಳೆಯ ಹುಟ್ಟಿಗೆ ಭರವಸೆಯನ್ನೂ ತುಂಬಿರುತ್ತದೆ. ಆ ಭರವಸೆಯ ಕಿರಣ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡವರಿಗೆಲ್ಲಾ ದೊರಕಲೆಂದು ಮನಃಪೂರ್ವಕವಾಗಿ ಹಾರೈಸುವೆ.
ಬದುಕು ಬಿಚ್ಚಿ-ಮುಚ್ಚುವ ಪರಿಯ ಅದ್ಭುತವನ್ನ, ಅದರಲ್ಲಿನ್ನ ಭೀಭಿತ್ಸವನ್ನ ವಿವರಿಸುತ್ತಾ ಅದರಲ್ಲಿನ ಸಕಾರಾತ್ಮಕ ಪ್ರ್‍ಏಮದ ದೃಷ್ಟಿಕೋನದೊ೦ದಿಗೆ ಮುಕ್ತಾಯದ ಸಾಲುಗೌ ಓದುಗರಿಗೆ ಅಪ್ಯಾಯಮಾನವೆನಿಸುವದು.
ಒಳ್ಳೆಯ ಕವನ ಸರ್
Nice one..
nice lines
ಶಿವರಾಂ ಭಟ್ ಅವರೆ,
ತೇಜಸ್ವಿನಿ ಹೆಗಡೆ ಅವರೆ,
ಸೀತಾರಾಮ್ ಕೆ.ಅವರೆ,
ದೀಪಸ್ಮಿತ ಅವರೆ,
ರವಿಕಾಂತ್ ಗೋರೆ ಅವರೆ,
ಅಶೋಕ್ ಕುಮಾರ್ ಅವರೆ,
ಕವನವನ್ನು ಮೆಚ್ಚಿ ಪ್ರತಿಸ್ಪಂದಿಸಿದ ನಿಮಗೆಲ್ಲರಿಗೂ ತುಂಬಾ ಆಭಾರಿ.
GOOD POEM,IN-FACT GUIDANCE!
ಒಳ್ಳೆಯ ಕವನ ಸಾರ್ ತುಂಬಾ ಚನ್ನಾಗಿದೆ.
ಹೊನ್ನ ಹನಿ
http://honnahani.blogspot.com/
ಶ್ರೀ ವಿ.ಅರ್.ಭಟ್ ಅವರೆ,
ಶ್ರೀ ಹರೀಶ್ ಅವರೆ,
ಕವನ ಮೆಚ್ಚಿ ಪ್ರತಿಸ್ಪಂದಿಸಿದ ನಿಮಗೆ ತುಂಬಾ ಅಭಾರಿ.
i experienced the touch of lines.
'ಹಸಿರು ಧರೆ ತುಂಬಾ ಅರಳಿತ್ತು,ಬದುಕಿ ಬಾಳುವ ಆಸೆ ಹೊತ್ತು.' - 'ನಿರ೦ತರ'ದಲ್ಲಿಯ ಆಶಾವಾದಿತ್ವ ಮನೋಜ್ಞವಾಗಿದೆ. ನನ್ನ ಬ್ಲಾಗ್ ಗೊಮ್ಮೆ ಭೇಟಿ ನೀಡಿ.
ನಾರಾಯಣ್ ಸರ್, ಭಾವನೆಗಳ ಲೇಪ ಹೊಂದಿದ ವಾಸ್ತವಗಳ ಬಿಂಬಿಸುವ ನಿಮ್ಮ ಸಾಲುಗಳು ಅಪೂರ್ವವಾಗಿವೆ. ಅದರಲ್ಲೂ ಈ ಸಾಲುಗಳು.....
ಹೊಂಗನಸುಗಳ ಕಂಗಳಲ್ಲೆಲ್ಲಅಂತರಾಳವ ಹೊಕ್ಕಿರಿವ ಕಿರಣಗಳುರಕ್ತಬೀಜಾಸುರನಂತೆ ಬಿತ್ತರಿಸಿಕಣ್ಣಿನಾಳದ ತಿಳಿನೀರುಹನಿಹನಿಯಾಗಿ ಹೊತ್ತಿ ಉರಿದುಕೃಷ್ಣವಿವರಗಳಾದವೋ.
ಎನ್ ಆರ್ ಕೆ ಅವರೆ,
ಪ್ರಭಾಮಣಿ ಅವರೆ,
ಜಲನಯನ ಅವರೆ,
ಕವನ ಮೆಚ್ಚಿ ಪ್ರತಿಸ್ಪಂದಿಸಿದ ನಿಮಗೆಲ್ಲರಿಗೂ ತುಂಬಾ ಅಭಾರಿ.
ಕವನವನ್ನು ಚೆನ್ನಾಗಿ ಬರೆದಿದ್ದೀರಿ.ಭೀಕರತೆಯ ಬಗೆಗಿನ ಅನಿಸಿಕೆಯೇ ಕೆಲವೊಮ್ಮೆ ಮನಸ್ಸನ್ನು ಸ್ಥಬ್ದ ಗೊಳಿಸಿಬಿಡುತ್ತದೆ.
ಭಟ್ಟರೇ ತಾವು ಏನನ್ನೂ ಬರೆಯಲೂ ಇಲ್ಲ ಬರಲೂ ಇಲ್ಲಾಂತ ನಿಮ್ಮನ್ನು ಹುಡುಕುತ್ತ ಬಂದೆ!
ನೀವು ನನ್ನ ಬ್ಲಾಗ್ ಗೆ ಬ೦ದು ಬಹಳ ದಿನಗಳಾದವು. ಒಮ್ಮೆ ಭೇಟಿ ನೀಡಿ.
Tumbaa Chennagide sir...Blr nalli nimmannu meet maadi tumbaa kushi aitu....
illomme bheti needi.....
http://ashokkodlady.blogspot.com
ಉತ್ತಮ ಕವನ ನಾನು ಇದೆ ಮೊದಲ ಬಾರಿಗೆ ನಿಮ್ಮ ಬ್ಲಾಗಿಗೆ ಬೇಟಿ ನೀಡಿದ್ದು ... ಕವನದ ಸಾಲುಗಳು ತುಂಬಾ ಚನ್ನಾಗಿ ಮೂಡಿಬಂದಿವೆ ....... ಒಮ್ಮೆ ಬನ್ನಿ ನನ್ನವಳಲೋಕಕ್ಕೆ ...
ನನ್ನ ಬ್ಲಾಗ್
www.nannavalaloka.blogspot.com
ನನ್ನ ಸ್ನೇಹಲೋಕ .......(orkut)
satishgowdagowda@gmail.com
Post a Comment