Thursday, December 17, 2009

ನಾನು ಮತ್ತು ಗೆಳೆಯರು

ನನ್ನ ಗೆಳೆತನ ಬಯಸಿ
ಬಂದವರೆಲ್ಲ ಅಂತಿಂಥವರಲ್ಲ.
ಹವ್ಯಾಸಗಳ ಹಿಂದೆ ಬಿದ್ದವರು,
ಮುಗುಳ್ನಗುತಾ ಮುಂದೆ ಬಂದು
ಅಕ್ಕರೆಯಲಿ ಸೆಳೆದುಕೊಂಡವರು.
ನನ್ನೆದೆಯ ಯಾವುದೋ ಮೂಲೆಯಲಿ
ಅರಿವಿಲ್ಲದೆಯೇ ಹುದುಗಿಕೊಂಡ
ಅವರಿಷ್ಟದ ಸುಪ್ತ ಚಿಗುರುಗಳ
ಹೊರಗೆಳೆದು ಬೆಳೆಸಿಕೊಂಡವರು.
ತಮ್ಮ ತಮ್ಮ ಮಾನಕ್ಕೆ ತಕ್ಕಂತೆ
ಅವರವರ ಗ್ಲಾಸುಗಳಲಿ
ನನ್ನ ಸುರಿದುಕೊಂಡವರು .

ನಂಬಿಕೆಯ ಭಾರದಲಿ
ಬೇರ ಸಡಲಿಸಲಾರೆ.
ಮಾತುಕತೆಯ ಮಧ್ಯದಲೇ
ನೇಪಥ್ಯಕೆ ನಡೆಯಲಾರೆ.
ಕಷ್ಟವಾದರೂ ಸರಿಯೆ,
ಹರಿವ ಕೃಷ್ಣೆಯ ಸೆರಗಿನಲಿ 
ಮಿಂಚುವ ಮುತ್ತುಗಳನಾಯ್ದು
ಶಶಿಯ ನೊಸಲ ಸಿಂಗರಿಸಬೇಕು. 
ಅಮವಾಸೆಯ ಆಕಾಶದಲಿ
ಅರಳುವ ಚುಕ್ಕೆಗಳ ಹಿಡಿದು
ಹುಣ್ಣಿಮೆಯ ಬೆಳದಿಂಗಳಿನಲಿ
ಹಾರಿಬಿಟ್ಟು ಹೊಗಳಿಸಿಕೊಳ್ಳಬೇಕು.
ಬೇಗೆಯಲಿ ಬೆಂದವರ
ಎದೆಯ ಕುಲುಮೆಯ
ನೋವಿನ ಕಥನವನು
ಹುಲ್ಲು ಹಾಸಿನ ಮೇಲೆ ಕುಳಿತು
ಮನಕರಗುವಂತೆ ಬಣ್ಣಿಸಬೇಕು.
ತಾನಾಗಿಯೇ ಒದಗಿ ಬಂದ ಗೆಳೆತನಕೆ
ನ್ಯಾಯ ಒದಗಿಸಬೇಕು.

22 comments:

ತೇಜಸ್ವಿನಿ ಹೆಗಡೆ said...

ಉತ್ತಮ ಆಶಯವನ್ನೊಳಗೊಂಡ ಸುಂದರ ಕವನ.

Narayan Bhat said...

ಕವನವನ್ನು ಮೆಚ್ಚಿಕೊಂಡು ಅದನ್ನು ತಲುಪಿಸುವ ಸಹೃದಯತೆಗೆ ಕೃತಜ್ಞತೆಗಳು.

ಗೌತಮ್ ಹೆಗಡೆ said...

chennagide kavana:)

Narayan Bhat said...

ಗೌತಮ್ ಹೆಗಡೆ ಅವರೇ,

ಕವನ ಚೆನ್ನಾಗಿದೆ ಎಂದು ಮೆಚ್ಚುಗೆ ಸೂಸಿದ್ದಕ್ಕೆ ಕೃತಜ್ಞತೆಗಳು. ನಿಮ್ಮ 'ನಾನೇಕೆ ಬರೆಯುತ್ತೇನೆ', 'ಧನ್ಯವಾದ', 'ಬರುತ್ತೇನೆ ಶೀಘ್ರ' ನನ್ನನ್ನೂ ಯೋಚಿಸಲು ಹಚ್ಚಿವೆ. ನಿಮ್ಮ ಯೋಚನೆಯ ಜೀವರೇಖೆಗಳು ಟಿಸಿಲೊಡೆಯುವ ಬಗೆ ಬೆರಗು ಹುಟ್ಟಿಸುವಂಥದ್ದು.

ಶಿವರಾಮ ಭಟ್ said...

ಪ್ರೀತಿಯ ನಾಭರಿಗೆ ,

ನಿಮ್ಮ ಕವಿತ್ವ ದೂರದ ಅಮೇರಿಕಾದಲ್ಲಿ ಹೊರಹೊಮ್ಮುತ್ತಿರುವುದು ಕನ್ನಡದ ಬ್ಲಾಗಿಗಳ ಭಾಗ್ಯವೇ ಸರಿ .

- ಶಿವರಾಮ

ಅಲೆಮಾರಿ said...

dhanyavaada sir nanna blog kade bandu nimma abhipraaya tilisiddakke:)

sunaath said...

ಗೆಳೆತನದ ಬಗೆಗೆ, ಗೆಳೆಯರ ಬಗೆಗೆ ನಿಮಗಿರುವ ಪ್ರೀತಿ, ಅಭಿಮಾನ ಮೆಚ್ಚತಕ್ಕದ್ದೇ!

Narayan Bhat said...

ಸುನಾಥ್ ಅವರೇ,

ಪ್ರತಿಕ್ರಿಯಿಸಿದ್ದಕ್ಕೆ ಮತ್ತು 'ಸಲ್ಲಾಪ'ದ ಮೂಲಕ ಗಂಭೀರ ಚಿಂತನೆಯೆಡೆಗೆ ಸೆಳೆಯುವ ನಿಮಗೆ ಕೃತಜ್ಞತೆಗಳು.

Anonymous said...

naarayan bhatravare,
EE kavanavu chennagi moodi bandide, moodi aago modi ago. avyaktateyinda vyaktate kadege kavanavu hariyali.
bvr

Shreepad Hegde Salkod said...

ಪ್ರಿಯ ನಾರಾಯಣ,
ನಿನ್ನ ಬ್ಲಾಗ್ ನೋಡಿ ಸಂತೋಷವಾಯಿತು.ಕವನಗಳು ಚೆನ್ನಾಗಿವೆ. ಬರೆಯುತ್ತಿರು

Narayan Bhat said...

ಮಿತ್ರ ಶ್ರೀಪಾದ್ ಹೆಗಡೆ, ಕವನವನ್ನು ಮೆಚ್ಚಿಕೊಂಡಿದ್ದಕ್ಕೆ ಕೃತಜ್ಞತೆಗಳು.

Narayan Bhat said...

ಆತ್ಮೀಯ ಶಿವರಾಮ(ಶಿವಣ್ಣ), ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.

Narayan Bhat said...

ಆತ್ಮೀಯ ಬಿ.ವಿ.ರಮೇಶ್, ನಿಮ್ಮ ಪ್ರತಿಕ್ರಿಯೆ ಮತ್ತು ಸಲಹೆಗಾಗಿ ಕೃತಜ್ಞತೆಗಳು.

ಚುಕ್ಕಿಚಿತ್ತಾರ said...

ಗೆಳೆತನದ ಬಗೆಗೆ ಮೂಡಿಬ೦ದ ಕವಿತೆ ಸು೦ದರವಾಗಿದೆ.ವ೦ದನೆಗಳು.

Narayan Bhat said...

ವಿಜಯಶ್ರೀ ಅವರೇ,
ಈ ಬ್ಲಾಗ್'ಗೆ ಬಂದು, ಕವಿತೆ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.

ಮನಮುಕ್ತಾ said...

ನಿರ್ಮಲ ಸ್ನೇಹ ಭಾವದ ವ್ಯಕ್ತ..ಉದಾತ್ತ ಆಶಯ...
ಭಾವ ಭಾವತು೦ಬಿದ ಕವನ..ಮತ್ತೆಮತ್ತೆ ಬರುತ್ತಿರಲಿ

ಆನಂದ said...

ಸುಂದರ ಕವನ. ಇಷ್ಟವಾಯ್ತು :)

Narayan Bhat said...

ಮನಮುಕ್ತಾ ಅವರೇ,
ಕವನವನ್ನು ಮೆಚ್ಚಿದ್ದಕ್ಕೆ ಕೃತಜ್ಞತೆಗಳು.

Narayan Bhat said...

ಆನಂದ್ ಅವರೇ,
ಈ ಬ್ಲಾಗ್'ಗೆ ಬಂದು, ನಿಮ್ಮ ಮೆಚ್ಚುಗೆಯನ್ನು ತಲುಪಿಸಿದ್ದಕ್ಕೆ ಕೃತಜ್ಞತೆಗಳು.

ಜಲನಯನ said...

ನಾರಾಯಣ್ ಭಟ್ ಸರ್, ನಿಮ್ಮಂತಹ ಹಿರಿಯರ ಮತ್ತು ಕವಿಗಳ ಪರಿಚಯ ಆದದ್ದು ಸಂತೋಷ...ಮಾತಲ್ಲಿ ಮೋಡಿ...ಪದಗಳಲ್ಲಿಭಾವನೆಗಳ ಕೋಡಿ...ನಿಮ್ಮ ಕವಿತೆ..ಸೂಪರ್...
ಅವರಿಷ್ಟದ ಸುಪ್ತ ಚಿಗುರುಗಳ
ಹೊರಗೆಳೆದು ಬೆಳೆಸಿಕೊಂಡವರು.
ತಮ್ಮ ತಮ್ಮ ಮಾನಕ್ಕೆ ತಕ್ಕಂತೆ
ಅವರವರ ಗ್ಲಾಸುಗಳಲಿ
ನನ್ನ ಸುರಿದುಕೊಂಡವರು .

ಈ ಸಾಲುಗಳು ಇಷ್ಟವಾದವು.

Narayan Bhat said...

ಜಲನಯನ ಅವರೆ,
ಕವನನ್ನ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.

GGHEGDE said...

ENU HELALI, COMMENT MADALU NANINNU LKG. NINNASTE PRABHUDDAVAGIDE NINNA KAVANA.