Monday, December 14, 2009

"ಬೇಡ ಕೃಷ್ಣಾ ರಂಗಿನಾಟ"

ಹೊಸಿಲ ಬಾಗಿಲಿಗೆ
"ಏಳುನೂರ ಎಂಭತ್ತಾರು"
ಎಂದು ಬರೆದ ಮಿತ್ರನ ಮನೆಯಲ್ಲಿ
ಗೋಡೆಯ ಮೇಲೆ ಇಳಿಬಿಟ್ಟ
ವರ್ಣಮಯ ಕ್ಯಾಲೆಂಡರಿನಲ್ಲಿ
ರಾಧಾಮಾಧವರ ರಂಗಿನಾಟದ ದೃಶ್ಯ .

ನೋಡ ನೋಡುತ್ತಿದ್ದಂತೆ
ಸಂಭ್ರಮಗಳೆಲ್ಲ ಧರೆಗಿಳಿದು
ಊರೆಲ್ಲ ಹೋಳಿಹುಣ್ಣಿಮೆಯ
ಓಕುಳಿಯಾಟದ ಕಲರವ.

ಸಿಂಗಾರದ ಬಂಡಿ ತುಂಬ
ಬಣ್ಣ ತುಂಬಿದ ಕುಂಭ.
ಚಿಣ್ಣರೋ ಮುದುಕರೋ
ಬಣ್ಣ ಚಿಮ್ಮುವರೇ ಎಲ್ಲ.
ವರ್ಣನೆಗೂ ಮೀರಿದ ಬಣ್ಣಗಳಿಗೆ
ಬೆರಗಾಗಿತ್ತು ಕಾಮನ ಬಿಲ್ಲು.

ಬಣ್ಣಗಳಲಿ ಮಿಂದವರು
ಒಬ್ಬರಿಗೊಬ್ಬರ ಗುರುತು
ಸಿಗದೇ ಬೇಸ್ತು ಬಿದ್ದರು.
ಒಬ್ಬರ ಮುಖ ಇನ್ನೊಬ್ಬರು
ನೋಡಿ ಮುಸಿ ಮುಸಿ ನಕ್ಕರು.

ಕೊನೆ ಕೊನೆಗೆ ಬಣ್ಣಗಳಿಗೇ ಮತ್ತೇರಿ,
ಕುಣಿದವು ತಮ್ಮ ತಮ್ಮಲ್ಲೇ ಮದವೇರಿ.
ಓಣಿ ಓಣಿಗೊಂದು, ಕೇರಿ ಕೇರಿಗೊಂಡು,
ಊರಿಗೆಷ್ಟೋ ಹೊರಟವು ವರ್ಣದ ತೇರು.
ಒಂದಕೊಂದಕೂ ರಂಗು ರಂಗಿನ
ಬೆಡಗಿನ ಪತಾಕೆ ಬೇರೆ ಬೇರೆ.
ತೇರಿನ ತುಂಬಾ ಬಣ್ಣಗಳ ಪಿಚಕಾರಿ,
ಆಗಾಗ್ಗೆ ಬಣ್ಣ ಬದಲಿಸುವ ಕೋವಿ.

ಒಂದರೊಳಗಿನ್ನೊಂದು ಬಣ್ಣ,
ಹೊರಗೊಂದು, ಒಳಗೊಂದು ವರ್ಣ.
ಶ್ಯಾಮ ವರ್ಣದಲ್ಲಿ
ಶಕುನಿ, ದುರ್ಯೋಧನ, ದುಷ್ಯಾಸನ.
ಕೊನೆ ಕೊನೆಗೊಂದೂ ಗೊತ್ತಾಗದೇ,
ಎಲ್ಲ ಸೇರಿ ಕಲಸು ಮೇಲೋಗರವಾಗಿ,
ಸರ್ವ ಬಣ್ಣ ಮಸಿ ನುಂಗಿತ್ತು.

ಕ್ಯಾಲೆಂಡರಿನಲ್ಲಿ ನಲಿವ ರಾಧೆಯ
ಮಿಂಚು ಕಣ್ಣುಗಳು ಬೆದರಿ,
ಮುಖ ಬಣ್ಣಗೆಟ್ಟು,
ಗೋಡೆಯಿಂದಿಳಿದು ಓಡಿಬಂದು,
ಶ್ಯಾಮನಲಿ
ಸೆರಗೊಡ್ಡಿ ಬೇಡಿಕೊಂಡಳು:
"ಬೇಡ ಕೃಷ್ಣ ರಂಗಿನಾಟ".

ಶ್ಯಾಮ ವರ್ಣದ ಮುಖಗಳಿಗೆಲ್ಲ
ಉಕ್ಕಿತ್ತು ಹೊಸ ಹುರುಪು,
ಕುಣಿಯತೊಡಗಿದವು ಕೈ ಕೈ ಹಿಡಿದು,
ಕೇಕೆ ಹಾಕುತ್ತ ರಾಧೆಯ ಸುತ್ತ.

ಟಿಪ್ಪಣಿ: ೭೮೬ ಒಂದು ಸಮುದಾಯವನ್ನು ಪ್ರತಿನಿಧಿಸಿದರೆ (ಇಲ್ಲಿ ಮುಸ್ಲಿಂ ಸಮುದಾಯ), ರಾಧೆ ಇನ್ನೊಂದು ಸಮುದಾಯವನ್ನು ಪ್ರತಿನಿಧಿಸುತ್ತಾಳೆ. ಒಟ್ಟಾರೆಯಾಗಿ ಈ ಕವನ, ಸಮಾಜದ ಸಾಮರಸ್ಯ ಹದಗೆಡುತ್ತಿರುವುದನ್ನು ಬಿಂಬಿಸುತ್ತದೆಯೆಂದು ಅಂದುಕೊಂಡಿದ್ದೇನೆ.

8 comments:

GGHEGDE said...

Estondu channagi baredidyo maraya.Khanditavagi
Hottekichatu.Alla istondu KAVITVA henge? Hogli
sahavasa dosha ennalu manasille.Thank you dosta
chandada kavanakke.

G G Hegde

Narayan Bhat said...

ದೋಸ್ತ, ಮೆಚ್ಚುಗೆಗಾಗಿ ಕೃತಜ್ಞತೆಗಳು. ಇದು ಒಂದು ಒಳ್ಳೆಯ ಪ್ರಯತ್ನವೆಂದಾದರೆ, ಅದು ನಿಜವಾಗಿಯೂ ಸಾಧ್ಯವಾದದ್ದು ಸಹವಾಸ ದೋಷದಿಂದಲೇ. ಅದರಲ್ಲಿ ನಿನ್ನ ಪಾಲೂ ಇದೆ.

Smits said...

Very nice mava.... i never knew you are such a good writer..
Keep it going....

Narayan Bhat said...

Thank you Smits for the appreciation. Let me try to keep it going!

Anonymous said...

Adbhuta athava AA Bhoota vo, Chennagide, mundevareyali
bvr

Narayan Bhat said...

ಕೃತಜ್ಞತೆಗಳು, bvr.

Shreepad Hegde Salkod said...

KAVANAGALU CHENNAGIDDU. HECHCHU HECHCHU BARE

Narayan Bhat said...

Thank you Shreepad.